passenger autorickshaw

ಎಲೆಕ್ಟ್ರಿಕ್ ವಾಹನಗಳು ತುಂಬ ಚೆನ್ನಾಗಿ ಕೆಲಸಮಾಡುತ್ತಾ ಇರುವುದರಿಂದ, ಎಲೆಕ್ಟ್ರಿಕ್-ಆಟೋ ರಿಕ್ಷಾಗಳು ಭಾರತದ ಅನೇಕ ನಗರ ಮತ್ತು ಉಪನಗರ ಪ್ರದೇಶಗಳಲ್ಲಿ ಜನಪ್ರಿಯ ಸಾರಿಗೆ ವಿಧಾನವಾಗಿದೆ. ದೇಶದ ವಿವಿಧ ಭಾಗಗಳಲ್ಲಿ ಎಲೆಕ್ಟ್ರಿಕ್-ರಿಕ್ಷಾಗಳು, ಟಕ್-ಟಕ್‌ಗಳು ಮತ್ತು ಟೊಟೊಸ್ ಎಂದೂ ಕರೆಯಲ್ಪಡುವ ಈ ಮೂರು-ಚಕ್ರ ವಾಹನಗಳು ವಿದ್ಯುತ್‌ನಿಂದ ಚಲಿಸುತ್ತವೆ. ಇದು ಪ್ರಯಾಣಿಕರ ಖರ್ಚನ್ನು ಕಡಿಮೆಮಾಡುವುದರ ಜೊತೆಗೆ ಮತ್ತು ಹೆಚ್ಚಿನ ಲಾಭವನ್ನು ಬಯಸುವ ಮಾಲೀಕರಿಗೆ ಲಾಭವನ್ನೂ ನೀಡುತ್ತಿವೆ.

ಎಲೆಕ್ಟ್ರಿಕ್-ಆಟೋ ರಿಕ್ಷಾಗಳನ್ನು ಏಕೆ ಆರಿಸಬೇಕು?

ಇ-ಆಟೋ ರಿಕ್ಷಾಗಳು ಹೆಚ್ಚು ಜನಪ್ರಿಯವಾಗಲು ಹಲವಾರು ಕಾರಣಗಳಿವೆ:

ಕಡಿಮೆ ಖರ್ಚು: ಇ-ರಿಕ್ಷಾಗಳಿಗೆ ಇಂಧನದ ಅಗತ್ಯವಿಲ್ಲದಿರುವುದರಿಂದ ಅದರ ನಿರ್ವಹಣಾ ಖರ್ಚು ಸಹ ಅತೀ ಕಡಿಮೆ. ಇದು ಬೇರೆ ರಿಕ್ಷಾಗಳಿಗಿಂತ ಅಗ್ಗವಾಗಿದೆ.

ಓಡಿಸಲು ಸುಲಭ: ಆಟೋ ಗೇರ್ ಟ್ರಾನ್ಸ್‌ಮಿಷನ್‌ನಿಂದಾಗಿ ಇ-ರಿಕ್ಷಾಗಳು ಓಡಿಸಲು ಸುಲಭ. ವಾಹನ ಚಲಾಯಿಸುವ ಅನುಭವ ಹೆಚ್ಚಿಲ್ಲದವರಿಗೂ ಇದು ಉತ್ತಮ ಆಯ್ಕೆಯಾಗಿದೆ.

ಅನುಕೂಲತೆ: ಇ-ರಿಕ್ಷಾಗಳು ವೇಗವಾಗಿ ಚಲಿಸುತ್ತದೆ. ಇದರಿಂದ ತುಂಬ ಜನ ಓಡಾಡುವ ರಸ್ತೆಗಳಲ್ಲೂ ಓಡಿಸಲು ತುಂಬ ಸುಲಭ.

ಪರಿಸರ ಸ್ನೇಹಿ: ಇ-ರಿಕ್ಷಾಗಳಿಂದ ಹೊಗೆ ಬರದೇ ಇರುವುದರಿಂದ ಪರಿಸರ ಮಾಲಿನ್ಯ ಆಗಲ್ಲ ಮತ್ತು ಹವಾಮಾನ ಬದಲಾವಣೆಯನ್ನೂ ತಡೆಯುತ್ತದೆ

ಭಾರತದಲ್ಲಿ ಜನಪ್ರಿಯ ಇ-ಆಟೋ ರಿಕ್ಷಾ ಮಾದರಿಗಳು

ಹಲವಾರು ಇ-ಆಟೋ ರಿಕ್ಷಾ ಮಾದರಿಗಳು ಭಾರತದಲ್ಲಿ ಲಭ್ಯವಿದೆ. ಪ್ರತಿಯೊಂದಕ್ಕೂ ಅದರದೇ ಆದ ವೈಶಿಷ್ಟ್ಯಗಳು ಮತ್ತು ಪ್ರಯೋಜನಗಳಿವೆ. ಕೆಲವು ಜನಪ್ರಿಯ ಮಾದರಿಗಳು ಇಲ್ಲಿವೆ:

Montra ePV2.0: ಇದು ಆಧುನಿಕ ವಿನ್ಯಾಸದ ಸೊಗಸಾದ ವೈಶಿಷ್ಟ್ಯತೆಯಿರುವ ಇ-ರಿಕ್ಷಾ ಮಾದರಿಯಾಗಿದೆ.

Piaggio Ape ECity FX: ಇದು ಪ್ರೀಮಿಯಂ ಇ-ರಿಕ್ಷಾ ಮಾದರಿಯಾಗಿದ್ದು ಅದರ ಬಾಳಿಕೆ, ಶ್ರೇಣಿ ಮತ್ತು ಕಾರ್ಯಕ್ಷಮತೆಗೆ ಹೆಸರುವಾಸಿಯಾಗಿದೆ. 

Piaggio Ape ECity FX Max: ಇದು ದೀರ್ಘ ಶ್ರೇಣಿ ಮತ್ತು ಹೆಚ್ಚಿನ ವೈಶಿಷ್ಟ್ಯಗಳಿರುವ Ape ECity FX ನ ಹೊಸ ಆವೃತ್ತಿಯಾಗಿದೆ.

ಮಹಿಂದ್ರಾ ಟ್ರಿನೋ ಪ್ಲಸ್ ಹೆಚ್ ಆರ್ ಟಿ: ಮಹೀಂದ್ರಾ ಆಟೋ ರಿಕ್ಷಾದ ಈ ಮಾಡೆಲ್ ಸೀಟ್ ತುಂಬ ವಿಶಾಲವಾಗಿರುವುದರಿಂದ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣ ನೀಡುತ್ತದೆ ಮತ್ತು ಇದಕ್ಕೆ ಹೆಚ್ಚಿನ ಗ್ರೌಂಡ್ ಕ್ಲಿಯರೆನ್ಸ್ ಮತ್ತು ಕಾರಿನಂತಹ ಗಟ್ಟಿಯಾದ ಮೇಲ್ಛಾವಣಿ ಇದೆ.

ಮಹಿಂದ್ರಾ ಟ್ರಿನೋ ಪ್ಲಸ್ ಎಸ್ ಎಫ್ ಟಿ: ಇದು ದಕ್ಷತೆಯ ಮೇಲೆ ಕೇಂದ್ರೀಕರಿಸುವ ಹೆಚ್ಚು ಕೈಗೆಟುಕುವ ಇ-ರಿಕ್ಷಾ ಮಾದರಿಯಾಗಿದೆ.

ಬಜಾಜ್ ಆರ್ ಈ ಇ-ಟೆಕ್ 9.0: ಎಲೆಕ್ಟ್ರಿಕ್ ಬಜಾಜ್ ಆಟೋ ರಿಕ್ಷಾವು ದೀರ್ಘ ಬಾಳಿಕೆಯೊಂದಿಗೆ ಶಕ್ತಿಯುತ ಮತ್ತು ಒರಟಾದ ಇ-ರಿಕ್ಷಾ ಮಾದರಿಯಾಗಿದೆ.

ಭಾರತದಲ್ಲಿ ಇ-ಆಟೋ ರಿಕ್ಷಾ ಬೆಲೆ

ಇ ಆಟೋ ರಿಕ್ಷಾದ ಮಾಡೆಲ್, ಬ್ಯಾಟರಿ ಸಾಮರ್ಥ್ಯ ಮತ್ತು ಇತರ ವೈಶಿಷ್ಟ್ಯಗಳನ್ನು ಆಧಾರಿಸಿ ಅವುಗಳ ಬೆಲೆ ಬದಲಾಗಬಹುದು. ಆದರೂ ಪ್ರತಿ ಇ-ರಿಕ್ಷಾದ ಆರಂಭಿಕ ಬೆಲೆ ಸುಮಾರು ರೂ 3.2 ಲಕ್ಷಗಳು. ರಾಜ್ಯ ಸರ್ಕಾರದ ಸಬ್ಸಿಡಿಯನ್ನು ಆಧಾರದ ಮೇಲೆ ಬೇರೆಬೇರೆ ರಾಜ್ಯಗಳಲ್ಲಿ ಎಲೆಕ್ಟ್ರಿಕ್ ಆಟೋ ರಿಕ್ಷಾ ಬೆಲೆಯಲ್ಲಿ ವ್ಯತ್ಯಾಸವಿರಬಹುದು.

ಎಲೆಕ್ಟ್ರಿಕ್ ವಾಹನಗಳಿಗೆ ಸರ್ಕಾರದ ಪ್ರೋತ್ಸಾಹ - ಫೇಮ್ 2 ಸಬ್ಸಿಡಿ

"ಹೈಬ್ರಿಡ್ ಮತ್ತು ಎಲೆಕ್ಟ್ರಿಕ್ ವಾಹನಗಳ ವೇಗದ ಅಳವಡಿಕೆ ಮತ್ತು ತಯಾರಿಕೆ (ಫೇಮ್ 2)" ಎಂಬುದು ಭಾರತ ಸರ್ಕಾರ ದೇಶದಲ್ಲಿ ಎಲೆಕ್ಟ್ರಿಕ್ ವಾಹನಗಳ ಅಭಿವೃದ್ಧಿ ಮತ್ತು ಅಳವಡಿಕೆಯನ್ನು ಹೆಚ್ಚಿಸಲು ಪ್ರಾರಂಭಿಸಿರುವ ಯೋಜನೆಯಾಗಿದೆ. ಹವಾಮಾನ ಬದಲಾವಣೆಯನ್ನು ಎದುರಿಸುವ ಜಾಗತಿಕ ಪ್ರಯತ್ನಗಳಲ್ಲಿ ಈ ಉಪಕ್ರಮವು ನಿರ್ಣಾಯಕವಾಗಿದೆ. ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ಕೈಗೆಟುಕುವಂತೆ ಮಾಡಲು ಬೇರೆಬೇರೆ ಹಣಕಾಸು ವಿಧಾನಗಳನ್ನ ನೀಡುವ ಮೂಲಕ ಎಲೆಕ್ಟ್ರಿಕ್ ವಾಹನಗಳಲ್ಲಿ ಹೂಡಿಕೆ ಮಾಡಲು ಜನರನ್ನು ಮತ್ತು ವ್ಯಾಪಾರಗಳನ್ನು ಉತ್ತೇಜಿಸುವ ಗುರಿ ಭಾರತ ಸರ್ಕಾರಕ್ಕಿದೆ. 

ಫೇಮ್ 2 ಒದಗಿಸಿದ ಪ್ರಯೋಜನಗಳ ಪಟ್ಟಿ ಇಲ್ಲಿದೆ:

ಖರೀದಿಸಲು ಹಣ ರಿಯಾಯಿತಿ: ಎಲೆಕ್ಟ್ರಿಕ್ ವಾಹನಗಳ ಒಟ್ಟಾರೆ ವೆಚ್ಚವನ್ನು ಕಡಿಮೆ ಮಾಡುವ ಮೂಲಕ ಬಳಕೆದಾರರಿಗೆ ನೇರ ರಿಯಾಯಿತಿಗಳನ್ನು ನೀಡಲಾಗುತ್ತದೆ

ಕೂಪನ್‌ಗಳು: ಕೂಪನ್‌ಗಳ ಮೂಲಕ ಹಣವನ್ನು ಕಡಿಮಗೊಳಿಸಲಾಗುತ್ತದೆ ಮತ್ತು ನಂತರ ಪಾವತಿಸಿದ ಹಣದಲ್ಲಿ ಸ್ವಲ್ಪ ಹಣವನ್ನು ಮರುಪಾವತಿಸಲಾಗುತ್ತದೆ.

ಬಡ್ಡಿ ರಿಯಾಯಿತಿಗಳು: ಎಲೆಕ್ಟ್ರಿಕ್ ವಾಹನವನ್ನು ಖರೀದಿಸಲು ಸಾಲವನ್ನು ಪಡೆದಾಗ ಬಡ್ಡಿದರದ ಮೇಲೆ ರಿಯಾಯಿತಿಗಳು.

ರಸ್ತೆ ತೆರಿಗೆ ವಿನಾಯಿತಿ: ವಾಹನ ಖರೀದಿಯ ಸಮಯದಲ್ಲಿ ರಸ್ತೆ ತೆರಿಗೆ ಮನ್ನಾ ಮಾಡಲಾಗುತ್ತದೆ.

ನೋಂದಣಿ ಶುಲ್ಕ ವಿನಾಯಿತಿ: ಹೊಸ ವಾಹನ ಖರೀದಿ ಮಾಡುವ ಸಮಯದಲ್ಲಿ ಕಟ್ಟುವ ನೋಂದಣಿ ಶುಲ್ಕದಿಂದ ವಿನಾಯಿತಿ.

ಆದಾಯ ತೆರಿಗೆ ಪ್ರಯೋಜನ: ಒಬ್ಬ ವ್ಯಕ್ತಿಯು ಸರ್ಕಾರಕ್ಕೆ ಪಾವತಿಸಬೇಕಾದ ತೆರಿಗೆ ಮೊತ್ತದ ಮೇಲೆ ಕಡಿತವಾಗಿ ಒದಗಿಸಲಾಗಿದೆ.

ಸ್ಕ್ರಾಪಿಂಗ್ ಇನ್ಸೆಂಟಿವ್ಸ್: ಹಳೆಯ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ನೋಂದಣಿ ರದ್ದುಗೊಳಿಸಿದ ನಂತರ ಒದಗಿಸಲಾಗುತ್ತದೆ.

ಈ ಎಲ್ಲಾ ಪ್ರಯೋಜನಗಳಿಂದ ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿನ ಜನರು ಇಷ್ಟಪಡುತ್ತಾರೆ ಮತ್ತು ಖರೀದಿಸಲು ಅವಕಾಶ ಸಿಗುತ್ತದೆ. ಇದರಿಂದ ಪರಿಸರವನ್ನು ಕಾಪಾಡುವ ಸರ್ಕಾರದ ಗುರಿ ತಲುಪಲು ಮತ್ತು ಇಂಧನದ ಬಳಕೆ ಕಡಿಮೆ ಮಾಡಲು ಸಾಧ್ಯವಾಗುತ್ತದೆ.

ಇ-ಆಟೋ ರಿಕ್ಷಾಗಳಿಗೆ ಸಬ್ಸಿಡಿ ಪ್ರತಿ kWh ಗೆ 10,000 ರೂ.

ಮೂಲ: ಇ-ಅಮೃತ್

ಇ-ಆಟೋ ರಿಕ್ಷಾಗಳನ್ನು ಎಲ್ಲಿ ಖರೀದಿಸಬೇಕು

Passenger EV at Turno

ಇ-ಆಟೋ ರಿಕ್ಷಾಗಳನ್ನು ಬ್ರ್ಯಾಂಡ್ ಡೀಲರ್‌ಶಿಪ್‌ಗಳಿಂದ ಖರೀದಿಸಬಹುದು. ಆದರೂ ನೀವು ಎಲ್ಲಾ ಉತ್ತಮ ಎಲೆಕ್ಟ್ರಿಕ್ ಆಟೋ-ರಿಕ್ಷಾಗಳನ್ನು ಒಂದೇ ಸೂರಿನಡಿ ಸಂಶೋಧಿಸಲು, ಹೋಲಿಸಲು ಮತ್ತು ಅನುಭವಿಸಲು ಬಯಸಿದರೆ, ನೀವು ಭಾರತದ ನಂ.1 ಮಲ್ಟಿಬ್ರಾಂಡ್ EV ಡೀಲರ್ ಟರ್ನೊಗೆ ಭೇಟಿ ನೀಡಬೇಕು. ಎಲ್ಲಾ ವಾಣಿಜ್ಯ ಎಲೆಕ್ಟ್ರಿಕ್ ವಾಹನಗಳು ಟರ್ನೋದಲ್ಲಿ ಸಿಗುತ್ತವೆ. ನಿಮ್ಮ ವಾಣಿಜ್ಯ ಎಲೆಕ್ಟ್ರಿಕ್ ಆಟೋದ ಸಂಪೂರ್ಣ ಖರೀದಿ ಪ್ರಯಾಣವನ್ನು ಟರ್ನೊ ನೋಡಿಕೊಳ್ಳುತ್ತದೆ  ಮರುಮಾರಾಟಕ್ಕೆ ಸರಿಯಾದ ವಾಹನವನ್ನು ಆಯ್ಕೆ ಮಾಡುವುದರಿಂದ ಪ್ರಾರಂಭಿಸಿ. ಟರ್ನೊ ಎಲ್ಲಾ ಹೆಚ್ಚು ಮಾರಾಟವಾಗುವ ಎಲೆಕ್ಟ್ರಿಕ್ ಆಟೋ-ರಿಕ್ಷಾ ತಯಾರಕರೊಂದಿಗೆ ಅಂದರೆ ಪಿಯಾಜಿಯೋ, ಮಹೀಂದ್ರಾ, ಬಜಾಜ್ ಮತ್ತು ಮಾಂಟ್ರಾದೊಂದಿಗೆ ಸಹಭಾಗಿತ್ವ ಹೊಂದಿದೆ.

ಟರ್ನೊ 5-ದಿನದದಲ್ಲಿ ವಾಹನ ವಿತರಣೆ ಮಾಡುತ್ತದೆ ಮತ್ತು ಎಲೆಕ್ಟ್ರಿಕ್ ಆಟೋ-ರಿಕ್ಷಾಗಳಿಗೆ 100% ಖಚಿತ ಹಣಕಾಸು ಒದಗಿಸುತ್ತದೆ. ಟರ್ನೋದ ಉಚಿತ ಮೊಬೈಲ್ ಅಪ್ಲಿಕೇಶನ್‌ನೊಂದಿಗೆ ಬೇರೆ ವಾಹನ ಮತ್ತು ಸಾಲ-ಸಂಬಂಧಿತ ವಿವರಗಣೆಗಳನ್ನು ಪಡೆಯಬಹುದು ಮತ್ತು ಬ್ಯಾಟರಿ ಆರೋಗ್ಯವನ್ನು ಟ್ರ್ಯಾಕ್ ಮಾಡಬಹುದು. ಅದಲ್ಲದೇ, ಟರ್ನೊ 36 ತಿಂಗಳ ನಂತರ ಖಚಿತವಾದ ಮರುಮಾರಾಟವನ್ನು ಸಹ ನೀಡುತ್ತದೆ.

ತೀರ್ಮಾನ

ಇ-ಆಟೋ ರಿಕ್ಷಾಗಳು ಸುಸ್ಥಿರ ಮತ್ತು ಕೈಗೆಟುಕುವ ಸಾರಿಗೆ ಆಯ್ಕೆಯಾಗಿದ್ದು ಅದು ಭಾರತೀಯ ಆಟೋ ಉದ್ಯಮವನ್ನು ಬದಲಾಯಿಸುತ್ತಾ ಇದೆ. ಇ-ರಿಕ್ಷಾಗಳ ಪ್ರಯೋಜನ, ಸರ್ಕಾರದ ಬೆಂಬಲ ಮತ್ತು ಹೆಚ್ಚುತ್ತಿರುವ ಜಾಗೃತಿಯೊಂದಿಗೆ, ಮುಂಬರುವ ವರ್ಷಗಳಲ್ಲಿ ರಸ್ತೆಗಳಲ್ಲಿ ಇನ್ನಷ್ಟು ಇ-ರಿಕ್ಷಾಗಳನ್ನು ನಾವು ನಿರೀಕ್ಷಿಸಬಹುದು.

Click here to read this blog in English.